ಸನ್ಯಾಸಿಗಳ ಪ್ರವಾಸ ಬೆಂಗಳೂರು 15-17 ಸೆಪ್ಟೆಂಬರ್, 2023

ಯೋಗದಾ ಸತ್ಸಂಗ ಸೊಸೈಟಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಸನ್ಯಾಸಿಗಳ ಪ್ರವಾಸದ ಭಾಗವಾಗಿ ಕರ್ನಾಟಕದಲ್ಲಿ ಈ ಕೆಳಗೆ ನಮೂದಿಸಿರುವ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಕನ್ನಡದಲ್ಲಿ ಹಾಗೂ ಇಂಗ್ಲೀಷಿನಲ್ಲಿ ಧ್ಯಾನ ತಂತ್ರಗಳ ತರಗತಿಗಳನ್ನು ಹಾಗೂ ಸತ್ಸಂಗಗಳನ್ನು ಸಂನ್ಯಾಸಿಗಳು ಮಾಡಲಿದ್ದಾರೆ.

 🌷 ಬೆಂಗಳೂರು: ಮೂರು ದಿನಗಳ ಕಾರ್ಯಕ್ರಮ  - ಸೆಪ್ಟಂಬರ್ 15 ರಿಂದ 17, ಶುಕ್ರ, ಶನಿ, ಭಾನುವಾರ. (ಕ್ರಿಯಾ ದೀಕ್ಷೆ 17 ಭಾನುವಾರ.) ಕನ್ನಡದಲ್ಲಿ ಧ್ಯಾನ ತಂತ್ರಗಳ ಪುನರಾವಲೋಕನ ಇರುತ್ತದೆ.