ಆತ್ಮೀಯ ದಿವ್ಯಾತ್ಮರೆ ಜೈ ಗುರು!
ಸೆಪ್ಟೆಂಬರ್ 21 ಮತ್ತು 22 ಶನಿವಾರ ಮತ್ತು ಭಾನುವಾರ ಆಧ್ಯಾತ್ಮಿಕ ಸಾಧಕ ಬಂಧುಗಳಿಗಾಗಿ ಕನ್ನಡದಲ್ಲಿ ವಿಶೇಷವಾಗಿ ಶಿಬಿರವನ್ನು (Retreat) ಏರ್ಪಡಿಸಲಾಗಿದೆ.
ಶಿಬಿರದಲ್ಲಿ ವೈ ಎಸ್ ಎಸ್ ಧ್ಯಾನತಂತ್ರಗಳನ್ನು ಹೇಳಿಕೊಡುವುದರಿಂದ ಪುನರಾವಲೋಕನದ ದೃಷ್ಟಿಯಿಂದ ಸಾಧಕರಿಗೆ ಹಾಗೂ ವೈ ಎಸ್ ಎಸ್ ಪಾಠಗಳಿಗೆ ಹೊಸದಾಗಿ ಹೆಸರನ್ನು ನೋಂದಾಯಿಸಿರುವ ಭಕ್ತರಿಗೆ ಇದು ಉತ್ತಮ ಅವಕಾಶವಾಗಿರುತ್ತದೆ.
ಶಿಬಿರದಲ್ಲಿ ಚೈತನ್ಯದಾಯಕ ವ್ಯಾಯಾಮ, ಧ್ಯಾನ, ಸತ್ಸಂಗ, ಧ್ಯಾನ ತಂತ್ರಗಳ ತರಗತಿಗಳು, ವೈಯಕ್ತಿಕ ಸಮಾಲೋಚನೆ (counselling) ಒಳಗೊಂಡಂತೆ ವೈಯಕ್ತಿಕ ಸಾಧನೆಗಾಗಿ ಸಹ ವ್ಯವಸ್ಥೆ ಇರುತ್ತದೆ. ಜೊತೆಗೆ ಎರಡೂ ದಿನ ಭಜನ್ ಕಾರ್ಯಕ್ರಮ ಸಹ ಇರುತ್ತದೆ.
ದಿನಾಂಕ: ಸೆಪ್ಟಂಬರ್ 21- 22 ಶನಿವಾರ ಮತ್ತು ಭಾನುವಾರ.
ಸ್ಥಳ: ಶ್ರೀಪೆರುಂಬುದುರ್ ಧ್ಯಾನದ ಶಿಬಿರ.
ಶುಲ್ಕ: ಯಾವುದೇ ರೀತಿಯ ನೋಂದಣಿ ಶುಲ್ಕ ಇರುವುದಿಲ್ಲ.
ಮೊದಲು ಬಂದವರಿಗೆ ಆದ್ಯತೆ. ಆದ್ದರಿಂದ ಆದಷ್ಟು ಬೇಗ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಪ್ರಾರ್ಥನೆ. {ರೈಲಿನ ಟಿಕೆಟ್ ಅನ್ನು ಮುಂಚಿತವಾಗಿ ಕಾಯ್ದಿರಿಸುವುದು ಅಪೇಕ್ಷಿತ}
ಹೆಸರು ನೋಂದಾಯಿಸಲು ಸಂಪರ್ಕಿಸಬೇಕಾದ ಸಂಖ್ಯೆ:
9880628459 - 9591075339.
ವಿಳಾಸ: ಯೋಗದಾ ಸತ್ಸಂಗ ಧ್ಯಾನ ಕೇಂದ್ರ. ಚೆನ್ನೈ ಧ್ಯಾನ ಶಿಬಿರ.
ಮಣ್ಣೂರು ವಿಲೇಜ್.
ಪೋಸ್ಟ್ ವಲ್ಲಾರ್ ಪುರಂ.
ತಾಲೂಕು ಶ್ರೀಪೆರುಂಬುದುರ್, ಕಂಚಿಪುರಂ. ತಮಿಳ್ ನಾಡು - 602105.
Website: https://chennairetreat.ysskendra.org